ತುರ್ಕಿ ಶಿಕ್ಷಣ ಪದ್ಧತಿ -
ಏಷ್ಯ ಹಾಗೂ ಯೂರೋಪು ಖಂಡಗಳ ನಡುವೆಯಿರುವ ಈ ಒಕ್ಕೂಟದ ಶಿಕ್ಷಣ ಪದ್ಧತಿ ಹಲವಾರು ವೈಶಿಷ್ಟ್ಯಗಳಿಂದ ಕೂಡಿದೆ. ಇಲ್ಲಿ ಮುಸ್ಲಿಂ ಸಂಪ್ರದಾಯದ ಶಿಕ್ಷಣ ಹಿಂದಿನಿಂದಲೂ ಆಚರಣೆಯಲ್ಲಿತ್ತು. ಆದರೆ ಈಗ ಯೂರೋಪು ಅಮೇರಿಕ ದೇಶಗಳ ಪ್ರಭಾವದಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದಾಗಿದೆ. ಭಾಷಾಧ್ಯಯನಕ್ಕೆ ಈಗ ಹೆಚ್ಚು ಪ್ರಾಧಾನ್ಯ ಲಭಿಸಿದೆ. ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹಲವಾರು ವಿದೇಶಿ ಸಂಸ್ಥೆಗಳು ರಾಷ್ಟ್ರದ ಶಿಕ್ಷಣ ವ್ಯವಸ್ಥೆಯಲ್ಲಿ ಇದ್ದರೂ ಆಗ ತುರ್ಕಿ ಜನಗೆಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಅಲ್ಲದೆ ಕೆಲವು ಕ್ಷೇತ್ರಗಳ ಶಿಕ್ಷಣ ಕೇಂದ್ರೀಯ ನಿಯಂತ್ರಣಕ್ಕೂ ಮತ್ತೆ ಕೆಲವು ಪ್ರಾಂತೀಯ ನಿಯಂತ್ರಣಕ್ಕೂ ಒಳಪಟ್ಟಿದೆ.

ಪ್ರಾಚೀನ ಮತ್ತು ಮಧ್ಯಯುಗಗಳಲ್ಲಿ; ಮುಸ್ಲಿಂ ರಾಷ್ಟ್ರಗಳಲ್ಲಿರುವ ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ತುರ್ಕಿಯಲ್ಲೂ ಇತ್ತು. ಪ್ರಾಥಮಿಕ ಶಿಕ್ಷಣಕ್ಕೆ ಮುಕ್ತಾಭ್ ಗಳೆಂಬ ಉನ್ನತ ಶಿಕ್ಷಣಕ್ಕಾಗಿ ಮದ್ರಸಗಳೆಂಬ ಸಂಸ್ಥೆಗಳು ಹಿಂದಿನಿಂದಲೂ ಆಸ್ತಿತ್ವದಲ್ಲಿದ್ದವು. ಪ್ರಾಥಮಿಕ ಶಾಲೆ ಸ್ಥಳೀಯ ಮಸೀದಿಗೆ ಸೇರಿದ್ದು ಗ್ರಾಮಾಧ್ಯಕ್ಷರ ನೇತೃತ್ವದಲ್ಲಿ ನಡೆಯುತ್ತಿದ್ದವು. ಅಲ್ಲಿ ಆಟೊಮನ್ ಭಾಷೆ ಮತ್ತು ಸಾಹಿತ್ಯವನ್ನು ಬೋಧಿಸುತ್ತಿದ್ದರು. ಮದ್ರಸಗಳು ಉನ್ನತ ಧಾರ್ಮಿಕ ಶಿಕ್ಷಣವಿತ್ತು ಧಾರ್ಮಿಕ ಸ್ಥಾನಗಳಿಗೆ ತರಬೇತು ನೀಡುತ್ತಿದ್ದವು. ಶಿಕ್ಷಣ ಉಚಿತವಾಗಿತ್ತು. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳೆರಡೂ ಮುಸ್ಲಿಂ ಸಾಂಪ್ರದಾಯಿಕ ದೃಷ್ಟಿಯನ್ನೂ ಆಟೊಮನ್ ಸಮಾಜದ ಪ್ರಗತಿವಿರೋಧಿ ಹಾಗೂ ಮಂದ ಸಂಪ್ದಾಯಬದ್ಧತೆಯನ್ನು ಪ್ರತಿಬಿಂಬಿಸುವ ಶಿಕ್ಷಣವನ್ನೂ ನೀಡುತ್ತಿದ್ದವು. ಈ ಶಿಕ್ಷಣ ಪದ್ಧತಿ ತುರ್ಕಿಯಲ್ಲಿ ಮಧ್ಯಯುಗಗಳಲ್ಲೂ ಅನಂತರವೂ ಮುಂದುವರಿಯುತ್ತ ಬಂತು.

ಆಧುನಿಕ ಕಾಲದಲ್ಲಿ : ಕಳೆದ ಶತಮಾನದ ಆರಂಭದಲ್ಲಿ ತುರ್ಕಿಯ ಶಿಕ್ಷಣವನ್ನು ಆಧುನಿಕ ದøಷ್ಟಿಯಲ್ಲಿ ವ್ಯವಸ್ಥೆಗೊಳಿಸುವ ಕಾರ್ಯ ಆರಂಭವಾಯಿತು. ಅದಕ್ಕೆ ಯುರೋಪಿನ ಶಿಕ್ಷಣ ಪದ್ಧತಿ ಮಾದರಿಯೆನಿಸಿತು. 1858 ರ ಸುಮಾರಿನಲ್ಲಿ ರಾಜಧಾನಿಯಾದ ಇಸ್ತಾಂಬುಲಿನಲ್ಲಿ ಮುಲ್ಕೀ ಲೀಸೇ ಎಂಬ ಎರಡು ಸಂಸ್ಥೆಗಳು ಸ್ಥಾಪನೆಯಾದವು. ಸರ್ಕಾರದಲ್ಲಿ ಕೆಲಸಕ್ಕೆ ಸೇರತ್ಕಕವರ ತರಬೇತಿಗಾಗಿ ಏರ್ಪಟ್ಟಿದ್ದ ಇವೆರಡು ಸಂಸ್ಥೆಗಳಿಗೆ ಯಾವ ಭೇದವೂ ಇಲ್ಲದೇ ಎಲ್ಲರಿಗೂ ಪ್ರವೇಶಾವಕಾಶವಿತ್ತು. ಲೀಸೇಗಳನ್ನು ಫ್ರಾನ್ಸಿನ ಹಿರಿಯ ಪ್ರೌಢಶಾಲೆಗಳ ಮಾದರಿಯಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಅಲ್ಲಿಗೆ ಸೇರಿದವರು ಪಾಂಡಿತ್ಯ ಪೂಣ್ ಸೈದ್ಧಾಂತಿಕ ವಿಷಯಗಳಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಈ ಸಂಸ್ಥೆಯ ಮೂಲಕ ತುರ್ಕಿಯ ಶಿಕ್ಷಣದ ಮೂಲಕ ಫ್ರೆಂಚ್ ಶಿಕ್ಷಣ ಪದ್ಧತಿಯ ಪ್ರಭಾವ ಬಿದ್ದಿತು. 1960 ರ ಅನಂತರ ಇಲ್ಲಿನವರು ಅಮೆರಿಕದಲ್ಲಿ ಶಿಕ್ಷಣ ಪಡೆದು ಬಂದುದರಿಂದ ಅಲ್ಲಿನ ಶಿಕ್ಷಣ ಪ್ರಭಾವವೂ ಬೀಳ್ಕೊಡತೊಡಗಿದೆ.

ಶಿಕ್ಷಣ ವ್ಯವಸ್ಥೆ: ತುರ್ಕಿಯಲ್ಲಿ ಪ್ರಾಥಮಿಕ ಶಾಲೆಯ ಅನಂತರ ಸಾಮಾನ್ಯ ಮತ್ತು ವೃತ್ತಿ ಶಿಕ್ಷಣಗಳು ಎರಡು ಸಮಾಂತರ ರೇಖೆಗಳಲ್ಲಿ ವ್ಯವಸ್ಥೆಯಾಗಿವೆ. ಮಾಧ್ಯಮಿಕ ಶಾಲೆ, ಲೀಸೇ ಮತ್ತು ವಿಶ್ವವಿದ್ಯಾಲಯ- ಇವು ಸಾಂಸ್ಕøತಿಕ ರೇಖಾ ವ್ಯವಸ್ಥೆ; ಕೈಗಾರಿಕಾ ಶಾಲೆ ಔದ್ಯೋಗಿಕ ಶಿಕ್ಷಣ ಸಂಸ್ಥೆ ಮತ್ತು ಉನ್ನತ ವೃತ್ತಿ ಆಥವಾ ತಾಂತ್ರಿಕ ಕಾಲೆಜುಗಳು - ಇವು ವೃತ್ತಿರೇಖಾ ವ್ಯವಸ್ಥೆ. ಮೊದಲ ವರ್ಗದ ಸಂಸ್ಥೆಗಳು ಸಾಂಸ್ಕøತಿಕ ಪಾಂಡಿತ್ಯಪ್ರದ ಸೈದ್ಧಾಂತಿಕ ಶಿಕ್ಷಣಕ್ಕೆ ಮೀಸಲಾಗಿದ್ದರೆ ಎರಡನೆಯ ವರ್ಗದವು ವಿವಿಧ ಉದ್ಯೋಗಗಳಿಗೆ ಸೇರತಕ್ಕವರಿಗೆ ಶಿಕ್ಷಣವೀಯುತ್ತದೆ.

ಬಹುತೇಕ ವಿದ್ಯಾಥಿಗಳು ಸರ್ಕಾರದ ಶಾಲಾಕಾಲೇಜುಗಳಲ್ಲಿ ಓದುತ್ತಾರೆ. ಜೊತೆಗೆ ಖಾಸಗಿ ವಿದ್ಯಾಸಂಸ್ಥೆಗಳೂ ಇವೆ. ಪ್ರೌಢಶಿಕ್ಷಣದ ಮಟ್ಟದವುಗಳಲ್ಲಿ ಮೂರು ವಿಧ : ಖಾಸಗಿ ಪ್ರೌಢಶಾಲೆ; ಅಮಿನಿಯನ್, ಗ್ರೀಕ್, ಯೆಹುದ್ಯ ಮುಂತಾದ ಅಲ್ಪಭಾಷಾಸಂಖ್ಯಾತರ ಶಾಲೆಗಳು; ವಿದೇಶಿ ಆಡಳಿತ ಸಂಸ್ಥೆಗಳು ನಡೆಸುವ ಪ್ರೌಢಶಾಲೆಗಳು, ಮೊದಲ ಮತ್ತು ಮೂರನೆಯ ವರ್ಗದ ಶಾಲೆಗಳಲ್ಲಿ ಮುಖ್ಯವಾಗಿ ವಿಶ್ವವಿದ್ಯಾಲಯಕ್ಕೆ ಹೋಗಲೆಳಸುವ ಶ್ರೀಮಂತ ಕುಟುಂಬದ ಮಕ್ಕಳು ಸೇರುತ್ತಾರೆ. ಇವುಗಳಿಗೆ ಆದಾಯ ಖಾಸಗಿ ಅಥವಾ ವಿದೇಶೀ ಮೂಲಗಳಿಂದ ಬಂದರೂ ಸರ್ಕಾರದ ಉಸ್ತುವಾರಿ ಚೆನ್ನಾಗಿರುತ್ತದೆ.
ಪ್ರಾಥಮಿಕ ಶಿಕ್ಷಣ: ಐದು ವರ್ಷದ ಪ್ರಾಥಮಿಕ ಶಾಲೆ ಮಕ್ಕಳ ಭಾವಾತ್ಮಕ ಸಾಮಾಜಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಮುಖ್ಯವಾಗಿ ಗಮನಕೊಡುತ್ತದೆ. ಆರೋಗ್ಯಕರ ಅಭ್ಯಾಸಗಳು ಸಂವೇದನಾಂಗಗಳ ಬಳಕೆಯಲ್ಲಿ ದಕ್ಷತೆ, ಸರಿಯಾಗಿ ತೀರ್ಮಾನಮಾಡುವಿಕೆ, ವೈe್ಞÁನಿಕ ಆಲೋಚನೆ ಒಳ್ಳೆಯ ಕುಟುಂಬ ಜೀವನ, ಇವನ್ನೆಲ್ಲ ಬೆಳೆಸಲಾಗುವುದು. ಪರಂಪರೆಯುಳ್ಳ ಜನಾಂಗವೊಂದರ ವ್ಯಕ್ತಿಯೆಂಬ ಹೆಮ್ಮೆಯನ್ನು ಮಕ್ಕಳಲ್ಲಿ ಮೂಡಿಸಲಾಗುವುದು. ಈ ಗುರಿಯನ್ನು ಸಾಧಿಸಲು ಸೂಕ್ತರೀತಿಯಲ್ಲಿ ಪಠ್ಯಕ್ರಮವನ್ನು ಗೊತ್ತುಮಾಡಲಾಗಿದೆ. ತುರ್ಕಿಯ ಇತಿಹಾಸ, ಭೂಗೋಳ ಪೌರನೀತಿ, ನಿಸರ್ಗವಿe್ಞÁನ, ಗೃಹವಿe್ಞÁನ, ಚಿತ್ರಲೇಖನ ಸಂಗೀತ, ಕೈಕೆಲಸ, ಗಣಿತ - ಇವೆಲ್ಲ ಪಠ್ಯಕ್ರಮದಲ್ಲಿ ಸೇರಿವೆ. ಕೃಷಿ ವಿಶೇಷ ಶಿಕ್ಷಣ ವಿಷಯವಾಗಿ ಗ್ರಾಮೀಣ ಶಾಲೆಗಳಲ್ಲಿ ಸೇರಿದೆ. ಆದರೆ ನಗರದ ಶಾಲೆಗಳಲ್ಲಿ ಅದರ ಬದಲು ದೈಹಿಕ ಶಿಕ್ಷಣ ಸೇರಿದೆ. ವಾರಕ್ಕೆÉ ಸರಾಸರಿ 25 ಗಂಟೆ ಬೋಧನೆ ಇದೆ. ಪ್ರತಿವರ್ಷ ನಡೆಯುವ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗುತ್ತದೆ. ರಾಷ್ಟ್ರದ ಎಲ್ಲ ಶಾಲೆಗಳಲ್ಲೂ ಏಕರೀತಿಯ ಪಠ್ಯ ಕ್ರಮವನ್ನು ಗೊತ್ತುಮಾಡಲಾಗಿದೆ. ವೇಳಾಪಟ್ಟಿ ಒಂದೇ ಆಗಿರುತ್ತದೆ. ಪರೀಕ್ಷೆ, ದಿನಚರಿ, ಪಾಠ ಪ್ರವಚನಗಳು. ರಜಾದಿನಗಳು ಮತ್ತು ಇತರ ಅಂಶಗಳ ಬಗ್ಗೆ ವಿವರವಾದ ನಿಯಂತ್ರಿತ ತಿಳುವಳಿಕೆ ನೀಡಿ ಒಂದು ಕೈಪಿಡಿಯಲ್ಲಿ ಆಧ್ಯಾಪಕರು ಸಾಧಿಸಬೇಕಾದ ಉದ್ದೇಶ, ಅನುಸರಿಸಬೇಕಾದ ವಿಧಾನಗಳನ್ನು ಸೂಚಿಸಲಾಗುತ್ತದೆ.

ಪ್ರೌಢ ಶಿಕ್ಷಣ: ಮಾಧ್ಯಮಿಕ ಶಾಲೆ ಮಕ್ಕಳಲ್ಲಿ ರಾಷ್ಟ್ರೀಯ ಪ್ರಜ್ಞೆ, ದೇಶಭಕ್ತಿ, ಸಂಸ್ಕøತಿ ಮತ್ತು ಇತಿಹಾಸಗಳ ಅರಿವನ್ನು ಮೂಡಿಸಲು ಯತ್ನಿಸುತ್ತದೆ; ರಾಷ್ಟ್ರಘಟನೆಯೂ ರಾಷ್ಟ್ರದ ಕಾನೂನುಗಳಿಗೂ ಒಪ್ಪುವಂತೆ ನಡೆದುಕೊಳ್ಳುವುದು, ಓದುಗಾರಿಕೆ, ಬರೆವಣಿಗೆ, ಮಾತುಗಾರಿಕೆ ಇವನ್ನು ಬೆಳೆಸುವುದು ಸೂಕ್ತ ವೃತ್ತಿಯನ್ನು ಅನುಸರಿಸಲು ನೆರವಾಗುವುದು, ನೈತಿಕ ಶಕ್ತಿಯನ್ನು ಹೆಚ್ಚಿಸುವುದು - ಇವೆಲ್ಲ ಸೇರಿವೆ. 32 ಗಂಟೆಗಳ ಕಾಲ ವಾರಕ್ಕೆ ಬೋಧÀನೆಯಿದ್ದು ತುರ್ಕಿಯ ಭಾಷೆ ಇತಿಹಾಸ, ಭೂಗೋಳ, ಗಣಿತ ಮುಂತಾದ ಸಾಮಾನ್ಯ ವಿಷಯಗಳ ಜೊತೆಗೆ ಕೃಷಿ, ತೋಟಗಾರಿಕೆ, ಕೈಕೆಲಸ (ಬಾಲಕರಿಗೆ) ಗೃಹವಿe್ಞÁನ (ಬಾಲಕಯರಿಗೆ), ಫ್ರೆಂಚ್, ಇಂಗ್ಲಿಷ್ ಅಥವಾ ಜರ್ಮನ್ ಭಾಷೆ, ದೈಹಿಕ ಶಿಕ್ಷಣ, ಚಿತ್ರರಚನೆ, ಸಂಗೀತ ಈ ವಿಷಯಗಳೂ ಪಠ್ಯಕ್ರಮದಲ್ಲಿ ಸೇರಿವೆ.

ಇತ್ತೀಚೆಗೆ ಸರ್ಕಾರ ಘೋಷಿಸಿದ ಶಿಕ್ಷಣ ಸುಧಾರಣೆಯ ಪ್ರಕಾರ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ, ಭಾಷಾಭಿಮಾನ ಮೂಡಿಸುವ, ಹಾಗೂ ಮುಸ್ಲಿಂ ಪೂರ್ವದ ಸಂಸ್ಕøತಿಯ ಶ್ರೇಷ್ಠತೆಯನ್ನು ತೋರಿಸುವ ಕಾರ್ಯಕ್ರಮಗಳು ಹೆಚ್ಚಾಗಿ ಕಾಣಬರುತ್ತವೆ.
ಮಾಧ್ಯಮಿಕಶಾಲೆ ಕೇಂದ್ರದ ಶಿಕ್ಷಣನಿರ್ದೇಶಕರ ಆಡಳಿತಕ್ಕೆ ಸೇರಿದೆ. ಸುಮಾರು 15 ಅಂಶಗಳು ಇಲ್ಲಿನ ಪಠ್ಯಕ್ರಮದಲ್ಲಿ ಸೇರಿವೆ. ಮೂರು ವರ್ಷದ ಶಿಕ್ಷಣದ ಅನಂತರ ನಡೆಯುವ ಅಂತಿಮ ಪರೀಕ್ಷೆಯಲ್ಲಿ ತೆರ್ಗಡೆಯಾದವರಿಗೆ ಮಾತ್ರ ಲೀಸಿಗೆ ಸೇರುವ ಅವಕಾಶ.

ಸೀಸೇ (ಉನ್ನತ ಪ್ರೌಢಶಾಲೆ)ತುರ್ಕಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ, ಅಲ್ಲಿಗೆ ಸೇರುವುದೇ ಒಂದು ಶ್ರೀಮಂತಿಕೆ. 1868 ರಲ್ಲಿ ಫ್ರಾನ್ಸಿನ ಸೀಸೇ, ಇಂಗ್ಲೆಂಡಿನ ಪಬ್ಲಿಕ್ ಸ್ಕೂಲ್, ಜರ್ಮನಿಯ ಜಿಮ್ಯಾಸಿಯು - ಇವು ಮೂರನ್ನೂ ಮಾದರಿಯಾಗಿ ಮಾಡಿಕೊಂಡು ಇಲ್ಲಿ `ಮುಕ್ತಾವ ಸುಲ್ತಾನ್ ಎಂಬ ಮೊದಲ ಸೀಸೇಯನ್ನು ಸ್ಥಾಪಿಸಲಾಯಿತು. ಇಲ್ಲಿ ತುರ್ಕಿ ಮತ್ತು ಫ್ರೆಂಚ್ ಭಾಷೆಗಳನ್ನು ಬೋಧನ ಮಾಧ್ಯಮವಾಗಿ ಬಳಸುತ್ತಿರುವರು. ಹಿಂದಿನ ಶಾಲೆಗಳಂತೆ ಇಲ್ಲೂ ತುರ್ಕಿ ಭಾಷೆ ಮತ್ತು ಸಾಹಿತ್ಯಗಳಿಗೆ ಅತ್ಯಧಿಕ ಕಾಲ ವಿನಿಯೋಗವಾಗುತ್ತದೆ. ಚರಿತ್ರೆ, ಭೂಗೋಳ, ಗಣಿತ, ನಿಸರ್ಗವಿe್ಞÁನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಅನ್ಯಭಾಷೆ, ದೈಹಿಕ ಶಿಕ್ಷಣ, ಮಿಲಿಟರಿ ಶಿಕ್ಷಣ ಇವು ಪಠ್ಯಕ್ರಮಗಳಲ್ಲಿ ಸೇರಿವೆ. ಎರಡನೆಯ ವರ್ಷದಲ್ಲಿ ಮನಶ್ಯಾಸ್ತ್ರವನ್ನೂ ಮೂರನೆಯ ವರ್ಷದಲ್ಲಿ ತತ್ತ್ವಶಾಸ್ತ್ರ, ತರ್ಕಶಾಸ್ತ್ರ, ಸಮಾಜಶ್ಯಾಸ್ತ್ರ - ಇವನ್ನೂ ಕಲಿಯುವ ಅವಕಾಶ ಕಲ್ಪಿಸಲಾಗಿದೆ.
ಲೀಸೆಗಳಂತೆ ಪ್ರೌಢಶಿಕ್ಷಣ ಮಟ್ಟದಲ್ಲಿ ಔದ್ಯೋಗಿಕ, ತಾಂತ್ರಿಕ ಮತ್ತು ವಾಣಿಜ್ಯ ಪ್ರೌಢಶಾಲೆಗಳೂ ಇವೆ. ಇವುಗಳ ಜೊತೆಗೆ ಇಮಾಮರಿಗೂ ಅಧ್ಯಾಪಕರಿಗೂ ವೃತ್ತಿ ಶಿಕ್ಷಣವೀಯುವ ಪ್ರೌಢಶಾಲೆಗಳಿವೆ. ನಾರ್ಮಲ್ ಸ್ಕೂಲುಗಳೆಂದು ಕರೆಯಲಾಗುವ ಈ ಶಾಲೆಗಳು ಪ್ರಾಥಮಿಕ ಶಾಲಾಶಿಕ್ಷಕರಿಗೆ ಶಿಕ್ಷಣವೀಯುತ್ತವೆ. ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗುವವರು ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದಲ್ಲಿ ಪದವೀ ಶಿಕ್ಷಣ ಪಡೆಯಬೇಕು.

ವೃತ್ತಿ ಮತ್ತು ತಾಂತ್ರಿಕ ಶಿಕ್ಷಣ: ದೇಶದಲ್ಲಿ ಎಲ್ಲ ಮಟ್ಟದ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣ ವ್ಯವಸ್ಥೆಯಿದ್ದರೂ ಅಭ್ಯರ್ಥಿಗಳು ಬರುವುದು ಕಡಿಮೆ. ಕೇವಲ ಕೆಳವರ್ಗದವರು ಮಾತ್ರ ಬರುತ್ತಾರೆ. ಇಲ್ಲಿ ಶಿಕ್ಷಣ ಪಡೆದವರು ಸರ್ಕಾರದ ಉದ್ಯೋಗಗಳಲ್ಲಿ ಸೇರಿ ಅಧಿಕಾರಿಗಳಾಗುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ.

ಉನ್ನತ ಶಿಕ್ಷಣ: ಇಲ್ಲಿ ನಾಲ್ಕು ವಿಶ್ವವಿದ್ಯಾಲಯಗಳು, ಎರಡು ಅಧ್ಯಾಪಕರ ಶಿಕ್ಷಣ ಕಾಲೇಜುಗಳು, 7 ಶಿಕ್ಷಣಶಾಸ್ತ್ರ ಸಂಸ್ಥೆಗಳು (ಪೆಡಗಾಗಿಕಲ್ ಇನ್ಸ್‍ಟಿಟ್ಯೂಟ್ಸ್ ), ಒಂದು ವಾಣಿಜ್ಯ ಶಿಕ್ಷಕರ ಶಿಕ್ಷಣದ ಕಾಲೇಜು, ಒಂದು ತಾಂತ್ರಿಕ ಶಿಕ್ಷಣದ ಕಾಲೇಜು, ಎರಡು ಮಹಿಳಾ ಶಿಕ್ಷಕರ ಕಾಲೇಜುಗಳು, 4ವಾಣಿಜ್ಯ ಮತ್ತು ಅರ್ಥಶಾಸ್ತ್ರದ ಕಾಲೇಜುಗಳು, 7 ಕಾರ್ಯಾಲಯದ ವಿe್ಞÁನದ, ವಿದ್ಯಾಲಯಗಳು, 26 ತಾಂತ್ರಿಕ ಶಿಕ್ಷಣ ಶಾಲೆಗಳು , ಲಲಿತಕಲೆಯ ಕಾಲೇಜು, ಮುಸ್ಲಿಂ ಧರ್ಮದ ಉನ್ನತ ಶಿಕ್ಷಣ ಸಂಸ್ಥೆ - ಇವು ಉನ್ನತ ಶಿಕ್ಷಣ ಸೌಲಭ್ಯವನ್ನೊದಗಿಸುತ್ತಿದೆ. 1863 ರಲ್ಲಿ ಅಮೆರಿಕ ಪ್ರಾಟೆಸ್ಟಂಟ್ ಪಾದ್ರಿಗಳು ಆರಂಭಿಸಿದ ಇಸ್ತಾನ್‍ಬುಲ್ ಕಲಾಶಾಸ್ತ್ರದ ಕಾಲೇಜು ಅಮೆರಿಕದ ಕಾಲೇಜುಗಳ ಮಾದರಿಯಲ್ಲಿ ರೂಪಿತವಾಗಿದೆ.

ಇಲ್ಲಿ ಕಲಾಶಾಸ್ತ್ರ, ವಾಣಿಜ್ಯ ಮತ್ತು ಎಂಜಿನಿಯರಿಂಗ್ ವಿದ್ಯೆಗಳು ಸ್ನಾತಕ ಪೂರ್ವ ಹಾಗೂ ಸ್ನಾತಕೋತ್ತರ ಪದವೀತರಗತಿಗಳಿಗೆ ಶಿಕ್ಷಣವೀಯಲಾಗುತ್ತದೆ. ಆಂಕರ, ಅಟಾಟರ್ಕ್, ಈಜಿಯನ್ ಮತ್ತು ಇಸ್ತಾನ್‍ಬುಲ್ ವಿಶ್ವವಿದ್ಯಾಲಯಗಳು; ಮೂರು ತಾಂತ್ರಿಕ ವಿಶ್ವವಿದ್ಯಾಲಯಗಳು ಆಸನದನ್ವಯ ವಿಶ್ವವಿದ್ಯಾಲಯದ ಅಂತಸ್ತು ಪಡೆದಿವೆ. 1453 ರಲ್ಲಿ ಆರಂಭವಾದ ಇಸ್ತಾನ್‍ಬುಲ್ ವಿಶ್ವವಿದ್ಯಾಲಯವೇ ಅತಿ ಪ್ರಾಚೀನವಾದುದು. ಇದರಲ್ಲಿ 6 ಫ್ಯಾಕಲ್ಪಿಗಳೂ ವಿಶಿಷ್ಟ ವಿದ್ಯಾಲಯಗಳೂ ಇತರ ಸಂಸ್ಥೆಗಳೂ ಇವೆ. ವಿಶ್ವವಿದ್ಯಾಲಯಗಳಿಗೆ ಪ್ರವೇಶಾವಕಾಶ ಸೀಮಿತ ಸಂಖ್ಯೆಯಲ್ಲಿರುವುದರಿಂದ ಪರೀಕ್ಷೆಗಳು ಕಠಿಣವಾಗಿವೆ.

ಆಡಳಿತ: ಇಡೀ ಒಕ್ಕೂಟದ ಶಿಕ್ಷಣ ಕೇಂದ್ರಸಚಿವಾಲಯದ ಮೇಲ್ವಿಚಾರಣೆಗೆ ಒಳಪಟ್ಟಿದೆ. ಅದರ ಸಹಾಯಕ್ಕಾಗಿ ಇಬ್ಬರು ಕಾರ್ಯದರ್ಶಿಗಳೂ ಬೇರೆ ಬೇರೆ ಶಿಕ್ಷಣ ಕ್ಷೇತ್ರಕ್ಕೆ ಬೇರೆ ಬೇರೆ ನಿರ್ದೇಶಕರೂ ಇರುವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ನಿರ್ದೇಶಕರು ಅವರಲ್ಲಿ ಹೆಚ್ಚು ಅಧಿಕಾರ ಹೊಂದಿರುವರು. ಅವರು ನೇರವಾಗಿ ಎಲ್ಲ ಪ್ರೌಢಶಾಲೆಗಳನ್ನೂ ನೋಡಿಕೊಳ್ಳುವರು. ಪ್ರಾಥಮಿಕ ಶಾಲೆಯ ನಿರ್ದೇಶಕರು, ಪ್ರಾಥಮಿಕ ಶಾಲೆಗಳ ಆಡಳಿತವನ್ನು ತನ್ನ ಅಧೀನದಲ್ಲಿರುವ ಇನ್ಸ್‍ಪೆಕ್ಟರುಗಳ ಮೂಲಕ ನಡೆಸುತ್ತಾರೆ. ಒಕ್ಕೂಟದ 67 ಪ್ರಾಂತ್ಯಗಳ ಇನ್ಸ್‍ಪೆಕ್ಟರು ಆಯಾ ಪ್ರಾಂತ್ಯದ ಗವರ್ನರುಗಳ ಮೂಲಕ ಕೇಂದ್ರ ಸಚಿವಾಲಯಕ್ಕೆ ಸಂಬಂಧಿಸಿರುವರು. ಶಿಕ್ಷಣ ನೀತಿಯನ್ನು ರೂಪಿಸುವ ಸಲಹೆ ನೀಡಲು ಶಿಕ್ಷಣಾಧಿಕಾರಿಗಳನ್ನೂ ಪಂಡಿತರನ್ನೂ ಒಳಗೊಂಡ ಶಿಕ್ಷಣದ ಪರಮಾಧಿಕಾರಿ ಸಮಿತಿಯಿದೆ.

ಉನ್ನತ ಶಿಕ್ಷಣ ಆಡಳಿತಕ್ಕಾಗಿ ಪ್ರತ್ಯೇಕ ನಿರ್ದೇಶಕರಿರುವರು. ಉನ್ನತ, ತಾಂತ್ರಿಕ ಶಿಕ್ಷಣದ ಮೂರು ಶಾಖೆಗಳು ಮೂವರು ನಿರ್ದೇಶಕರ ಆಡಳಿತಕ್ಕೆ ಸೇರಿವೆ. ಉಪಚಾರಿಕಾಶಾಲೆ ಸಮುದ್ರಯಾನಶಾಲೆ ಇವುಗಳನ್ನು ಸಂಬಂಧಿಸಿದ ಸಚಿವಾಲಯವೇ ನೋಡಿಕೊಳ್ಳುತ್ತದೆ.

ಆಧುನಿಕ ಪ್ರವೃತ್ತಿಗಳು ಮತ್ತು ಸಮಸ್ಯೆಗಳು: ಎಲ್ಲರಿಗೂ ಸಮಾನ ಶಿಕ್ಷಣ ಸೌಲಭ್ಯವನ್ನೊದಗಿಸಲು ರಾಷ್ಟ್ರ ಯತ್ನಿಸುತ್ತಿದ್ದರೂ ಅದು ಅಸಾಧ್ಯವಾಗಿದೆ. ಶಿಕ್ಷಣ ಸೌಲಭ್ಯಗಳ ಬಹುಪಾಲು ಹತ್ತಿರದ ನಗರಗಳಲ್ಲೇ ಕೇಂದ್ರಿಕರಿಸಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಆ ಸೌಲಭ್ಯ ತೀರ ಅಲ್ಪವಾಗಿದೆ. ದೇಶದ 2/3 ಭಾಗದಷ್ಟು ಗ್ರಾಮಗಳಲ್ಲಿ ಶಾಲೆಗಳೇ ಇಲ್ಲ. 7 ರಿಂದ 14 ವರ್ಷದ ವರೆಗೆ ಶಿಕ್ಷಣ ಕಡ್ಡಾಯ ವಾಗಿದ್ದರೂ ಕೇವಲ ಆ ವಯೋಮಾನದ ಸೇ. 65070 ರಷ್ಟು ಮಾತ್ರ ಶಾಲೆಗೆ ಸೇರಿದ್ದಾರೆ. ಅವರಲ್ಲಿ ಬಹುಮಂದಿ ಮಧ್ಯೆ ಬಿಟ್ಟುಹೋಗುತ್ತಾರೆ. ಕೈಗಾರಿಕೆ, ಉದ್ಯೋಗ, ತಂತ್ರಶಾಸ್ತ್ರ - ಇವುಗಳ ಶಿಕ್ಷಣದಲ್ಲಿ ಜನತೆಗೆ ಆಸಕ್ತಿ ಕಡಿಮೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸ ತೀರ ಹಿಂದುಳಿದಿದೆ. ಶಿಕ್ಷಣ ಪಡೆದವರು ಸರ್ಕಾರಕ್ಕೆ ಸೇರಲು ಆತುರರಾಗಿರುವರೆ ಹೊರತು ಸ್ವತಂತ್ರ ಉದ್ಯಮಿಗಳಾಗುವ ಪ್ರವೃತ್ತಿ ಕಾಣಬರುವುದಿಲ್ಲ.										(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ